Gandhi life history in kannada language


Gandhiji Information in Kannada, About Gandhiji in Kannada, Mahatma Gandhi entertain Kannada Writing, ಮಹಾತ್ಮ ಗಾಂಧೀಜಿ ಮಾಹಿತಿ, Gandhiji Jeevana Charitre in Kanarese Gandhiji Life Story in Kanarese Information About Mahatma Gandhi delicate Kannada Gandhi Biography in Kannada

ಗಾಂಧೀಜಿಯವರ ಜೀವನ ಚರಿತ್ರೆ ಕನ್ನಡದಲ್ಲಿ

ಆತ್ಮೀಯರೇ… ಈ ಲೇಖನದಲ್ಲಿ ನಾವು ಗಾಂಧಿಜಿಯವರ ಜನನ ವಿದ್ಯಾಭ್ಯಾಸ ಹಾಗೂ ಜೀವನ ಚರಿತ್ರೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿರುತ್ತೇವೆ ನೀವು ಈ ಲೇಖನವನ್ನು ಓದುವುದರ ಮೂಲಕ ಗಾಂಧೀಜಿಯವರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಗಾಂಧೀಜಿ

ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅಕ್ಟೋಬರ್ 2ನ್ನು ನಾವು ಗಾಂಧಿ ಜಯಂತಿ ಎಂದು ಆಚರಣೆ ಮಾಡುತ್ತೇವೆ.ಇದು ಭಾರತ ರಾಷ್ಟ್ರಿಯ ಹಬ್ಬವಾಗಿವಾಗಿದೆ.

ಗಾಂಧೀಜಿ ಹುಟ್ಟು – ಸಂಸಾರ-ವಿದ್ಯಾಬ್ಯಾಸ :

ಅಕ್ಟೋಬರ್ 2, 1869ರಲ್ಲಿ ಗುಜರಾತ್ ನ ಪೋರಬಂದರ್ ನಲ್ಲಿ ಈ ಧೀಮಂತ ನಾಯಕನ ಜನನವಾಯ್ತು.

ತಂದೆ ಕರಮಚಂದ್ ಗಾಂಧಿ, ತಾಯಿ ಪುತಲೀಬಾಯಿ.

ಇವರ ಪೂರ್ಣ ಹೆಸರು ಮೋಹನದಾಸ್ ಕರಮ ಚಂದ್ ಗಾಂಧಿ. ತನ್ನ 13ನೇ ವಯಸ್ಸಿನಲ್ಲಿ ಗಾಂಧೀಜಿ ಅವರಿಗೆ ಕಸ್ತೂರಿ ಬಾ ರೊಂದಿಗೆ ವಿವಾಹವಾಯ್ತು.

ಇವರಿಬ್ಬರಿಗೆ ನಾಲ್ಕು ಮಕ್ಕಳು ಜನಿಸಿದರು. ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. ತನ್ನ 19 ನೇ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನ ಯೂನಿವರ್ಸಿಟಿ ಕಾಲೇಜಿನಿಂದ ಕಾನೂನು ಪದವಿ ಪಡೆದರು.

ಇವರ ಎರಡು ಮೂಲ ಮಂತ್ರಗಳು ಸತ್ಯ ಮತ್ತು ಅಹಿಂಸೆ ದಕ್ಷಿಣ ಆಫ್ರೀಕಾದಲ್ಲಿ ಗಾಂಧೀಜಿಯವರಿಗೆ ಕೈಸರ್-ಐ-ಹಿಂದ್ ಜುಲೋ ವಾಕ್ ಮೆಡಲ್ ಮೋಮರ್ ವಾಕ್ ಮೆಡಲ್ ಪ್ರಶಸ್ತಿಗಳು ದೊರಕಿತು.

ಭಾರತದಲ್ಲಿ ಸತ್ಯಾಗ್ರಹ ಆಶ್ರಮ ಆರಂಭಿಸಿದ ಗಾಂಧೀಜಿ:

ಸುದೀರ್ಘ ವರ್ಷಗಳ ನಂತರ ಗಾಂಧೀಜಿ 1915ರಲ್ಲಿ ಭಾರತಕ್ಕೆ ಮರಳಿದರು.

ಅದೇ ವರ್ಷ ಅಹಮದಾಬಾದಿನಲ್ಲಿ ಸತ್ಯಾಗ್ರಹ ಆಶ್ರಮವನ್ನು ಸ್ಥಾಪಿಸಿದ ಗಾಂಧಿ, ಬ್ರಿಟೀಷರ ಹಿಡಿತದಲ್ಲಿ ಭಾರತವನ್ನು ನೋಡಿ ಮರುಗಿದರು.

ಭಾರತಕ್ಕೆ ಸ್ವಾತಂತ್ರ್ಯ ಸಿಗದೆ ಬೇರೆ ದಾರಿ ಇಲ್ಲ ಎಂದು ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿ ಸಂಪೂರ್ಣ ಹೋರಾಟಕ್ಕೆ ಇಳಿದರು.

ಭಾರತದಲ್ಲಿ ಚಳುವಳಿಗಳ ಆರಂಭ:

1920-22 ಅಸಹಕಾರ ಚಳುವಳಿ, 1930 ರಲ್ಲಿ ಉಪ್ಪಿನ ಸತ್ಯಾಗ್ರಹ , 1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಹೋರಾಟ ನಡೆಸಿದರು.

ಮಹಾತ್ಮ ಗಾಂಧಿ ಜಯಂತಿ ಬಗ್ಗೆ ಮಾಹಿತಿ

1920 ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು.

ಗಾಂಧೀಜಿ ತತ್ವ, ಸಿದ್ದಾಂತಗಳು :

ಮಹಾತ್ಮಗಾಂಧಿ ಅವರ ಪ್ರಮುಖ ತತ್ವ ಸಿದ್ದಾಂತವೆಂದರೆ ಅದು ಸತ್ಯ ಮತ್ತು ಅಹಿಂಸೆ. ಗಾಂಧಿ ತಮ್ಮ ಆತ್ಮಚರಿತ್ರೆ “ನನ್ನ ಸತ್ಯಾನ್ವೇಷಣೆ” (“ಮೈ ಎಕ್ಸ್ಪೆರಿಮೆಂಟ್ಸ್ ವಿಥ್ ಟ್ರುಥ್”)ಯಲ್ಲಿ ಸತ್ಯ ಮತ್ತು ಅಹಿಂಸೆಗಳು, ತಲೆತಲಾಂತರದಿಂದ ಬಂದ ನೀತಿಬೋಧನೆಗಳಾಗಿವೆ.

About Gandhiji In Kannada

ಅದರಲ್ಲಿ ನಾನು ಹೊಸದಾಗಿ ಹೇಳಿರುವುದು ಏನೂ ಇಲ್ಲ ಎಂದಿದ್ದಾರೆ.

ಈ ಸತ್ಯ ಮತ್ತು ಅಹಿಂಸೆಗಳು, ಗಾಂಧಿಯವರ ಮುಖವಾಡ ಮಾತ್ರ ಆಗಿರದೆ ಅದರಂತೆ ಬದುಕಿ ತೋರಿಸಿದ್ದರು. ಈ ಸತ್ಯ ಮತ್ತು ಅಹಿಂಸೆಯಾಂದಿಗೆ ತಮ್ಮ ಕೊನೆಯ ಉಸಿರಿರುವವರೆಗೆ ಪ್ರಯೋಗ ನಡೆಸಿದರು.

ಗಾಂಧೀಜಿ ಅವರ ಶೈಕ್ಷಣಿಕ ಸಿದ್ದಾಂತ :

ಶಿಕ್ಷಣ ಎಂದರೆ ಮಗುವನ್ನು ಮನುಷ್ಯನನ್ನಾಗಿಸುವ ಸರ್ವತ್ರ ಸಾಧನ ಎಂದಿದ್ದ ಗಾಂಧಿ, ದೇಹ, ಮಿದುಳು ಹಾಗೂ ಚೈತನ್ಯ ಎಲ್ಲವನ್ನೂ ರೂಪಿಸುವುದೇ ಶಿಕ್ಷಣ ಎಂದು ಪ್ರತಿಪಾದಿಸಿದ್ದರು.

ಗುಜರಾತ್ ವಿದ್ಯಾಪೀಠದ ಘೋಷವಾಕ್ಯ ‘ಸಾ ವಿದ್ಯಾ ಯಾ ವಿಮುಕ್ತೆ’ ಎನ್ನುವ ಸಾಲಿನಲ್ಲಿ ಗಾಂಧೀಜಿ ಬಲವಾದ ನಂಬಿಕೆ ಇರಿಸಿದ್ದರು.

ಹೀಗಾಗಿ ಪ್ರಾಥಮಿಕ ಶಿಕ್ಷಣವು ಉಚಿತವಾಗಿಯೂ ಹಾಗೂ ಕಡ್ಡಾಯವಾಗಿ ಇದರಬೇಕು. ಅಹಿಂಸೆಯನ್ನು ಶಿಕ್ಷಣದ ತಳಹದಿಯಾಗಬೇಕು.

ಏಕೆಂದರೆ ಸಮಾಜ ಪರಿವರ್ತನೆಗೆ ಅದು ಉಪಕರಣವೆಂಬುದನ್ನು ಅವರು ಗ್ರಹಿಸಿದ್ದರು. ಹೀಗಾಗಿ ಸರ್ವೋದಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟರು.

ಗಾಂಧಿ ಓರ್ವ ಲೇಖಕ, ವಾಗ್ಮಿ:

ಗಾಂಧೀಜಿ ಓರ್ವ ಉತ್ತಮ ವಾಗ್ಮಿ, ಬರಹಗಾರರಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಇಂಡಿಯನ್ ಒಪೀನಿಯನ್‌ ಪತ್ರಿಕೆ, ಭಾರತಕ್ಕೆ ಮರಳಿದ ನಂತರ ಗುಜರಾತಿ,

ಹಿಂದಿ ಮತ್ತು ಆಂಗ್ಲಭಾಷೆಗಳಲ್ಲಿ ಹರಿಜನ್‌ ಪತ್ರಿಕೆ, ಆಂಗ್ಲಭಾಷೆಯಲ್ಲಿ ಯಂಗ್ ಇಂಡಿಯಾ ಪತ್ರಿಕೆ ಮತ್ತು ನವಜೀವನ್‌‌‌ ಎಂಬ ಗುಜರಾತಿ ಮಾಸಪತ್ರಿಕೆಯೂ ಸೇರಿದಂತೆ ಹಲವು ವೃತ್ತಪತ್ರಿಕೆಗಳಿಗೆ ಸಂಪಾದಕರಾಗಿದ್ದರು.

ಕರುನಾಡಿನಲ್ಲಿ ಗಾಂಧಿಯ ಹೆಜ್ಜೆಗಳು:

* 1915 ಮಾತ್ರವಲ್ಲ 1920, 1927, 1934, 1936ರಲ್ಲಿ ಕೂಡ ಹಲವು ಬಾರಿ ಗಾಂಧೀಜಿ ಬೆಂಗಳೂರಿಗೆ ಬಂದಿದ್ದಾರೆ.

*1934ರಲ್ಲಿ ದೊಡ್ಡ ಬಳ್ಳಾಪುರಕ್ಕೆ ಬಂದಿದ್ದ ಗಾಂಧೀಜಿ ಅಲ್ಲಿ ನೆರೆದಿದ್ದ 25 ಸಾವಿರದಷ್ಟು ಜನರಿಗೆ ದೇಶಪ್ರೇಮದ ಪಾಠ ಮಾಡಿದ್ದರು.

*1921 , ಅಕ್ಟೋಬರ್ 10 ರಂದು ಅಸಹಕಾರ ಚಳುವಳಿಯ ಪ್ರಚಾರಕ್ಕೆಂದು ಗಾಂಧಿ ಬಳ್ಳಾರಿಗೆ ರೈಲಿನಲ್ಲಿ ಬಂದಿದ್ದರು.

*ವಿಜಯಪುರ (ಆಗಿನ ಬಿಜಾಪುರ)ಕ್ಕೆ ಕಾಂಗ್ರೆಸ್ ನ 17 ಸಮಾವೇಶಕ್ಕೆಂದು 1918, ಮೇ 5ರಂದು ಬಂದಿದ್ದರು ಅದಾದ ಬಳಿಕ ಎರಡನೇ ಬಾರಿ 1921, ಮೇ 28ರಂದು ಗುಮ್ಮಟ ನಗರಿಗೆ ಬಂದಿದ್ದರು.

*ಮೈಸೂರಿಗೆ ಗಾಂಧೀಜಿ ಮೊದಲು ಭೇಟಿಕೊಟ್ಟಿದ್ದು, 1927ರಲ್ಲಿ, ಇದಾದ ಬಳಿಕ 1934ರಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಗರಿಗೆ ಗಾಂಧೀಜಿ ಭೇಟಿ ಕೊಟ್ಟಿದ್ದರು.

Mahatma Gandhi Information worry Kannada

*1927ರ ಅಗಸ್ಟ್ ನಲ್ಲಿ ಚಿಕ್ಕಮಗಳೂರಿನಗೆ ಬಂದಿದ್ದ ಗಾಂಧಿ, ಅಲ್ಲಿನ ಜಿಲ್ಲಾಧಿಕಾರಿ ಪ್ರಾಂಗಣದಲ್ಲಿ ಸಭೆ ನಡೆಸಿದ್ದಾರೆ.

*1934 ಮಾರ್ಚ್ 1ರಂದು ಚಿತ್ರದುರ್ಗ, ಶಿರಸಿ ಮೂಲಕ ಹಾವೇರಿಗೆ ಬಂದಿದ್ದರು.

*1934 ಮಾರ್ಚ್ 2 ರಂದು ದಾವಣಗೆರೆ ಬಂದ ಗಾಂಧಿ , ಅಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದರು.

ಅಲ್ಲಿಂದ ಬಳ್ಳಾರಿ , ಹುಬ್ಬಳ್ಳಿಗೆ ಭೇಟಿ ನೀಡಿದರು.

*ಮಹಾತ್ಮಾ ಗಾಂಧೀಜಿ ಅವರು ಉಡುಪಿ ಜಿಲ್ಲೆಗೆ ಬಂದದ್ದು ಕೇವಲ ಒಂದು ಬಾರಿ, ಅದು 1934ರ ಫೆ.25ರಂದು.

 ರಾಷ್ಟ್ರಪಿತ ಗೌರವ ಸಂಪಾದಿಸಿ

ಗಾಂಧಿಯವರು ವಿಶ್ವಾದ್ಯಂತ ಮಹಾತ್ಮ ಗಾಂಧಿ ಎಂದೇ ಚಿರಪರಿಚಿತರು (ಸಂಸ್ಕೃತ:  ಮಹಾತ್ಮ ಅಥವಾ ಮಹಾನ್ ಆತ್ಮ , ಎಂಬ ಗೌರವ ಸೂಚಕ  ಪದವನ್ನು ಅವರಿಗೆ ಮೊದಲು ನೀಡಿದ್ದು ರವೀಂದ್ರನಾಥ ಠಾಗೂರರು).
ಭಾರತದಲ್ಲೂ ಅವರು ಬಾಪು ಎಂದೇ ಚಿರಪರಿಚಿತರು  ಬಾಪು ಅಥವಾ .

ಮೊದಲ ಬಾರಿಗೆ ಸುಭಾಷ್ ಚಂದ್ರಬೋಸ್ ಅವರು ರಾಷ್ಟ್ರಪಿತ ಎಂದು ಕರೆದರು.

ಭಾರತ ದಲ್ಲಿ ಅವರನ್ನು ರಾಷ್ಟ್ರಪಿತ ಎಂದು ಅಧಿಕೃತವಾಗಿ ಗೌರವಿಸ ಲಾಗಿದ್ದು ಅವರ ಜನ್ಮದಿನವಾದ ಅಕ್ಟೋಬರ್ ೨ನ್ನು ಗಾಂಧಿ ಜಯಂತಿ ಎಂಬ ಸ್ಮರಣೀಯ ದಿನವನ್ನಾಗಿಸಿ ರಾಷ್ಟ್ರೀಯ ರಜಾ ದಿನವನ್ನಾಗಿಸಲಾಗಿದೆ ಮತ್ತು ವಿಶ್ವಾದ್ಯಂತ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.

 ನಾಗರಿಕ ಹಕ್ಕುಗಳಿಗಾಗಿ ಹೋರಾಟ ಸಂಪಾದಿಸಿ

ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ವಲಸಿಗ ವಕೀಲರಾಗಿದ್ದಾಗ ಅಲ್ಲಿ ವಾಸವಾಗಿದ್ದ ಭಾರತೀಯ ಸಮುದಾಯವು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆ ಸುತ್ತಿದ್ದ ಅವಧಿಯಲ್ಲಿ ಅಹಿಂಸಾತ್ಮಕ ನಾಗರಿಕ ಅವಿಧೇಯತೆಯ ಆಂದೋಲ ನವನ್ನು ಮೊದಲ ಬಾರಿಗೆ ಪ್ರಯೋಗಿಸಿದರು.

೧೯೧೫ರಲ್ಲಿ ಭಾರತಕ್ಕೆ ವಾಪಸಾದ ಬಳಿಕ, ಅತಿಯಾದ ಜಮೀನು ತೆರಿಗೆ ಮತ್ತು ತಾರತಮ್ಯಗಳಿಗೆ ಸಂಬಂಧಿಸಿದಂತೆ ರೈತರ, ಬೇಸಾಯಗಾರರ ಮತ್ತು ನಗರ ಪ್ರದೇಶದ ಕಾರ್ಮಿಕರ ಪ್ರತಿಭಟನೆಗಳನ್ನು ಅವರು ಸಂಘಟಿಸಿದರು.

ಸತ್ಯ ಸಂಪಾದಿಸಿ

ನಿಜ ಅಥವಾ ಸತ್ಯ ದ ಪರಿಶೋಧನೆಯೆಂಬ ವಿಸ್ತೃತ ಉದ್ದೇಶಕ್ಕಾಗಿ ಗಾಂಧಿಯವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು.

ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಅವರು ಇದನ್ನು ಸಾಧಿಸಲು ಯತ್ನಿಸಿದರು. ಅವರು ತಮ್ಮ ಆತ್ಮಚರಿತ್ರೆಯನ್ನು ದಿ ಸ್ಟೋರಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿಥ್ ಟ್ರುತ್ ಎಂದು ಕರೆದುಕೊಂಡರು.

Mahatma Gandhi information in Kannada Writing

ಮಹಾತ್ಮ ಗಾಂಧಿಯವರು ಅಹಿಂಸೆಯ ತತ್ವದ ಸೃಷ್ಟಿಕರ್ತೃರಲ್ಲದಿದ್ದರೂ, ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಅದನ್ನು ಅಳವಡಿಸುವಲ್ಲಿ ಅವರು ಮೊದಲಿಗರಾಗಿದ್ದರು.[೪೦] ಭಾರತೀಯ ಧಾರ್ಮಿಕ ಚಿಂತನೆಯಲ್ಲಿ ಹಿಂಸಾಚಾರವಿಲ್ಲದಿರುವಿಕೆ, (ಅಹಿಂಸೆ ) ಮತ್ತು ಪ್ರತಿರೋಧವಿಲ್ಲದಿರುವಿಕೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ.

ಸಸ್ಯಾಹಾರ ತತ್ವ ಸಂಪಾದಿಸಿ

ಬಾಲಕನಾಗಿದ್ದಾಗ ಗಾಂಧಿಯವರು ಪ್ರಾಯೋಗಿಕವಾಗಿ ಮಾಂಸಾಹಾರ ಸೇವಿಸುತ್ತಿದ್ದರು.

ಭಾಗಶ: ತಮ್ಮ ಅಂತರ್ಗತ ಕುತೂಹಲ ಮತ್ತು ಅವರ ಸ್ನೇಹಿತ ಮತ್ತು ಪೀರ್ ಶೇಕ್ ಮಹ್ತಾಬ್‌ನ ಒತ್ತಾಯವೇ ಇದಕ್ಕೆ ಕಾರಣ.

ಭಾರತದಲ್ಲಿ, ಸಸ್ಯಾಹಾರದ ಕಲ್ಪನೆಯು ಹಿಂದೂ ಮತ್ತು ಜೈನ್ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಮತ್ತು ಅವರ ಹುಟ್ಟೂರಿನ ರಾಜ್ಯವಾದ ಗುಜರಾತ್‌ನಲ್ಲಿ ಬಹುಪಟ್ಟು ಹಿಂದುಗಳು ಸಸ್ಯಾಹಾರಿಗಳಾಗಿದ್ದರು ಮತ್ತು ಬಹುಶ: ಎಲ್ಲಾ ಜೈನರೂ ಸಸ್ಯಾಹಾರಿಗಳಾಗಿದ್ದಾರೆ. ಗಾಂಧಿ ಕುಟುಂಬವೂ ಸಹ ಇದಕ್ಕೆ ಹೊರತಾಗಿರಲಿಲ್ಲ..

ಸಸ್ಯಾಹಾರವು ಬ್ರಹ್ಮಚರ್ಯೆದೆಡೆಗಿನ ಅವರ ಆಳವಾದ ಬದ್ಧತೆಯ ಆರಂಭಿಕ ಹಂತವಾಗಿತ್ತು; ಬಾಯಿ ರುಚಿಯ ನಿಯಂತ್ರಣವಿಲ್ಲದೆ ಅವರು ಬ್ರಹ್ಮಚರ್ಯೆಯಲ್ಲಿ ಸಾಫಲ್ಯ ಪಡೆಯುವುದು ಕಷ್ಟಕರವಾಗುತ್ತಿತ್ತು ಎಂಬ ಅಂಶವು ಅವರ ಆತ್ಮಕಥೆಯಲ್ಲಿ ನಮೂದಿಸಲ್ಪಟ್ಟಿದೆ.
ಗಾಂಧಿಯವರು ಫಲಾಹಾರಿಯಾಗಿದ್ದರು, ಆದರೆ ಅವರ ವೈದ್ಯರ ಸಲಹೆಯ ಮೇರೆಗೆ ಮೇಕೆಯ ಹಾಲನ್ನು ಸೇವಿಸಲು ಪ್ರಾರಂಭಿಸಿದರು.

ಬ್ರಹ್ಮಚರ್ಯೆ ಸಂಪಾದಿಸಿ

ಗಾಂಧಿಯವರು ೧೬ನೇ ವರ್ಷದವರಿದ್ದಾಗ ಅವರ ತಂದೆಯ ಆರೋಗ್ಯ ಸ್ಥಿತಿ ಹದಗೆಟ್ಟಿತು.

ತಮ್ಮ ಪೋಷಕರನ್ನು ತುಂಬಾ ಆರಾಧಿಸುತ್ತಿದ್ದ ಕಾರಣ, ಎಲ್ಲ ತರಹದ ಅನಾರೋಗ್ಯ ಸಮಯಗಳಲ್ಲಿಯೂ ಅವರು ತಂದೆಯ ಜೊತೆಯಲ್ಲಿ ಇರುತ್ತಿದ್ದರು.

ಆದಾಗ್ಯೂ, ಒಂದು ರಾತ್ರಿ, ಗಾಂಧಿ ಯವರ ಚಿಕ್ಕಪ್ಪನವರು ಗಾಂಧಿಯವರಿಗೆ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅವರು ತಮ್ಮ ಶಯ್ಯಾಕೋಣೆಗೆ ಹೋದಾಗ ವಿಷಯಲೋಲುಪದಾಸೆಗೆ ಒಳಗಾಗಿ ತಮ್ಮ ಪತ್ನಿಯೊಂದಿಗೆ ಮೈಥುನದಲ್ಲಿ ತೊಡಗಿದರು.

ಸರಳತೆ ಸಂಪಾದಿಸಿ

ಸಮಾಜ ಸೇವೆಯಲ್ಲಿ ನಿರತನಾಗಿರುವ ವ್ಯಕ್ತಿಯು ಸರಳ ಜೀವನ ನಡೆಸತಕ್ಕದ್ದು, ಇದು ಬ್ರಹ್ಮಚರ್ಯೆಯತ್ತ ಒಯ್ಯುತ್ತದೆ ಎಂದು ಗಾಂಧಿಯವರು ಮನ:ಪೂರ್ವಕವಾಗಿ ನಂಬಿದ್ದರು.

ಅವರು ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸುತ್ತಿದ್ದ ಪಾಶ್ಚಾತ್ಯ ಜೀವನಶೈಲಿಯನ್ನು ತ್ಯಜಿಸುವ ಮೂಲಕ ಅವರ ಸರಳತೆಯು ಆರಂಭವಾಯಿತು.

ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ, ಸರಳ ಜೀವನ ಶೈಲಿಯನ್ನು ರೂಪಿಸಿಕೊಂಡು, ತಮ್ಮ ಉಡುಪುಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಅವರು, ಇದು “ತಮ್ಮನ್ನೇ ಸೊನ್ನೆಗೆ ಕುಗ್ಗಿಸಿಕೊಳ್ಳುವ” ವಿಧಾನ ಎನ್ನುತ್ತಿದ್ದರು.

ಧರ್ಮಶ್ರದ್ಧೆ ಸಂಪಾದಿಸಿ

ಹಿಂದೂ ಧರ್ಮದಲ್ಲಿ ಜನಿಸಿದ ಗಾಂಧಿಯವರು, ತಮ್ಮ ತತ್ವಗಳಲ್ಲಿ ಬಹುಪಾಲನ್ನು ಹಿಂದೂ ಧರ್ಮದಿಂದ ಪಡೆದುಕೊಂಡು, ತಮ್ಮ ಜೀವನದುದ್ದಕ್ಕೂ ಹಿಂದೂಧರ್ಮವನ್ನು ಪರಿಪಾಲಿಸಿದರು.

ಓರ್ವ ಸಾಮಾನ್ಯ ಹಿಂದುವಾಗಿ, ಅವರು ಎಲ್ಲಾ ಧರ್ಮಗಳನ್ನೂ ಸಮಾನ ದೃಷ್ಟಿಯಲ್ಲಿ ಕಂಡರು, ಬೇರೊಂದು ಧರ್ಮಕ್ಕೆ ತಮ್ಮನ್ನು ಮತಾಂತರಗೊಳಿಸುವ ಎಲ್ಲ ಯತ್ನಗಳನ್ನೂ ಅವರು ತಳ್ಳಿಹಾಕಿದರು.                   ಅವರು ಅತ್ಯಾಸಕ್ತ ದೇವತಾಶಾಸ್ತ್ರಜ್ಞರಾಗಿದ್ದು ಎಲ್ಲಾ ಪ್ರಮುಖ ಧರ್ಮಗಳ ಬಗ್ಗೆಯೂ ವಿಸ್ತೃತವಾಗಿ ಓದಿದ್ದರು.

ಹಿಂದೂ ಧರ್ಮದ ಬಗ್ಗೆ ಅವರ ಅಭಿಪ್ರಾಯಗಳು ಹೀಗಿದ್ದವು:

 ಪತ್ರಿಕೆಯನ್ನು ಪ್ರಕಟಿಸಿದರು

ಗಾಂಧಿಯವರು ಓರ್ವ ಸಮೃದ್ಧ ಬರಹಗಾರರಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಇಂಡಿಯನ್ ಒಪೀನಿಯನ್‌ ಪತ್ರಿಕೆ, ಭಾರತಕ್ಕೆ ಮರಳಿದ ನಂತರ ಗುಜರಾತಿ, ಹಿಂದಿ ಮತ್ತು ಆಂಗ್ಲಭಾಷೆಗಳಲ್ಲಿ ಹರಿಜನ್‌ ಪತ್ರಿಕೆ, ಆಂಗ್ಲಭಾಷೆಯಲ್ಲಿ ಯಂಗ್ ಇಂಡಿಯಾ ಪತ್ರಿಕೆ ಮತ್ತು ನವಜೀವನ್‌‌‌ ಎಂಬ ಗುಜರಾತಿ ಮಾಸಪತ್ರಿಕೆಯೂ ಸೇರಿದಂತೆ ಹಲವು ವೃತ್ತಪತ್ರಿಕೆಗಳಿಗೆ ದಶಕಗಳ ಕಾಲ ಅವರು ಸಂಪಾದಕರಾಗಿದ್ದರು.

Gandhiji Information pustule Kannada books

ಗಾಂಧಿಯವರ ಬಗ್ಗೆ ಪುಸ್ತಕಗಳು ಸಂಪಾದಿಸಿ

ಹಲವು ಜೀವನಚರಿತ್ರಕಾರರು ಗಾಂಧಿಯವರ ಜೀವನವನ್ನು ವಿವರಿಸುವ ಕೆಲಸವನ್ನು ಕೈಗೊಂಡಿದ್ದಾರೆ.

ಅವುಗಳಲ್ಲಿ, ಎರಡು ಕೃತಿಗಳು ಪ್ರಸಿದ್ಧವಾಗಿವೆ:

ಎಂಟು ಸಂಪುಟಗಳಲ್ಲಿರುವ, D.

G. ತೆಂಡೂಲ್ಕರ್‌ರವರ ಮಹಾತ್ಮ. ಲೈಫ್‌ ಆಫ್‌ ಮೋಹನ್‌ದಾಸ್‌ ಕರಮ್‌ಚಂದ್‌ ಗಾಂಧಿ ಮತ್ತು ೧೦ ಸಂಪುಟಗಳಲ್ಲಿರುವ, ಪ್ಯಾರೇಲಾಲ್‌ ಮತ್ತು ಸುಶೀಲಾ ನಾಯರ್‌ರವರ ಮಹಾತ್ಮ ಗಾಂಧಿ .US ಸೇನಾದಳದ ಕರ್ನಲ್‌ Indistinct. B. ಸಿಂಗ್‌ ಗಾಂಧಿ: ಬಿಹೈಂಡ್‌ ದಿ ಮಾಸ್ಕ್‌ ಆಫ್‌ ಡಿವೈನಿಟಿ ಎಂಬ ಪುಸ್ತಕವನ್ನು ಬರೆದಿದ್ದಾರೆ.

ಮಹಾತ್ಮನ ಕೊನೆ ದಿನಗಳು :

ಕೊನೆಗೂ 1947 ಅಗಸ್ಟ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು.

ಆದರೆ ದೇಶ ಭಾರತ ಮತ್ತು ಪಾಕಿಸ್ತಾನ ಇಬ್ಬಾಗವಾಯಿತು ಅದನ್ನು ವಿರೋಧಿಸಿದ ಗಾಂದೀಜಿಯವರು ಹಿಂದೂ ಮುಸಲ್ಮಾನರ ನಡುವೆ ಸಾಮರಸ್ಯ ತರಲು ಶ್ರಮಿಸಿದರು. ಅಕ್ಟೋಬರ್ 2 ರಂದು ಇಡೀ ದೇಶದಾದ್ಯಂತ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ

FAQ :

ಗಾಂಧೀಜಿಯವರ ತಂದೆ ತಾಯಿ ಹೆಸರೇನು?

ತಂದೆ ಕರಮಚಂದ್ ಗಾಂಧಿ, ತಾಯಿ ಪುತಲೀಬಾಯಿ

ಮಹಾತ್ಮಾ ಗಾಂಧೀಜಿಯವರು ಯಾವಾಗ ಜನಿಸಿದರು?

ಅಕ್ಟೋಬರ್ 2, 1869ರಲ್ಲಿ ಗುಜರಾತ್ ನ ಪೋರಬಂದರ್ ನಲ್ಲಿ ಜನಿಸಿದರು.

ಇತರ ವಿಷಯಗಳು :

Kuvempu Information

ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ 

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಮಹಾತ್ಮಾ ಗಾಂಧೀಜಿಯವರ ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment busybody ನಲ್ಲಿ Comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Related

This entry was posted in Information and mark About mahatma gandhiji in kanarese, achivements of gandhiji in kanarese, gandhiji information in kannada, gandhiji information in kannada | leader gandhi information in kannada, gandhiji jeevana charitre, mahatma gandhi include kannada.